ಓಂ ಶ್ರೀ ಸಾಯಿರಾಂ.

ಆತ್ಮೀಯರೇ ಸರ್ವರಿಗೂ ಸಪ್ರೇಮ ಸಾಯಿರಾಮಗಳು.

ಸ್ವಾಮಿಯ ಸಂಕಲ್ಪದಂತೆ, ಶ್ರೀ ಸತ್ಯ ಸಾಯಿ ಸೇವಾ ಸಮಿತಿ, ಸಪ್ತಾಪುರ, ಧಾರವಾಡದಲ್ಲಿ ಇಂದು ಶ್ರೀ ಸತ್ಯಸಾಯಿ ಸತ್ಯ ನಾರಾಯಣ ವ್ರತ ನಡೆಯಿತು.
ಭಾಗವಹಿಸಿದ ಪ್ರತಿಯೊಬ್ಬರೂ ಅತ್ಯಂತ ಆನಂದ ಪಟ್ಟರು.

ಸುಮಾರು ೧೦೦ ಭಕ್ತರು, ‘ಸಾಯಿ ಚರಣ’ ಶಿಕ್ಷಣ ಸಂಸ್ಥೆಗಳ ಅಧ್ಯಾಪಕ ವೃಂದ, ವಿದ್ಯಾರ್ಥಿನಿಯರು, ಸುಮಾರು ೨೦ ಸಾಯಿ ಸಹೋದರರು, ಶ್ರೀ ಸತ್ಯಸಾಯಿ ವಿದ್ಯಾ ಜ್ಯೋತಿ ದತ್ತು ಗ್ರಾಮದ ಸಾಯಿ ಯುವಕರು, ಜಿಲ್ಲಾ ಹಾಗೂ ಸಮಿತಿ ಪದಾಧಿಕಾರಿಗಳು ಹಾಗೂ ಹಿರಿಯ ಭಕ್ತರು ಭಾಗಿಯಾದರು.

ಸಾಯಿರಾಂ.

Pin It on Pinterest

Share This

Share This

Share this post with your friends!